ಕೋಸ್ಟಾ ರಿಕ (ಸ್ಪ್ಯಾನಿಷ್ ಭಾಷೆಯಲ್ಲಿ ಸಂಪದ್ಭರಿತ ಕರಾವಳಿ), ಅಧಿಕೃತವಾಗಿ ಕೋಸ್ಟಾ ರಿಕ ಗಣರಾಜ್ಯ, ಮಧ್ಯ ಅಮೇರಿಕದ ಒಂದು ದೇಶ. ಇದರ ಉತ್ತರಕ್ಕೆ ನಿಕರಾಗುವ, ದಕ್ಷಿಣಕ್ಕೆ ಪನಾಮ, ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರ ಮತ್ತು ಪೂರ್ವಕ್ಕೆ ಕೆರಿಬ್ಬಿಯನ್ ಸಮುದ್ರಗಳಿವೆ. ಕೋಸ್ಟಾ ರಿಕ ಸಾಂವಿಧಾನಿಕವಾಗಿ ತನ್ನ ಸೇನೆಯನ್ನು ವಿಸರ್ಜಿಸಿ ರದ್ದು ಮಾಡಿದ ಮೊದಲ ದೇಶ.